ಕರದ್ : ಸತಾರಾ ಜಿಲ್ಲೆಯಲ್ಲಿರುವ ಒಂದು ನಗರ ಮತ್ತು ಇದೇ ಹೆಸರಿನ ತಾಲ್ಲೂಕಿನ ಕೇಂದ್ರ. ಉ. ಅ. 170 17' ಮತ್ತು ಪು. ರೇ. 740 11' ಗಳಲ್ಲಿ ಕೃಷ್ಣಾ ಕೊಯ್ನಾ ನದಿಗಳ ಸಂಗಮದ ಬಳಿ ಇದೆ. ಸತಾರಾ ನಗರ ಇರುವುದು ಇದರಿಂದ ವಾಯವ್ಯಕ್ಕೆ 50 ಕಿಮೀ ದೂರದಲ್ಲಿ. ಜನಸಂಖ್ಯೆ 56,149 (2001) ಬೌದ್ಧಕಾಲೀನ ಗುಹಾಲಯಗಳಿಂದಲೂ ಮುಸಲ್ಮಾನರ ಕಾಲದ ಮಸೀದಿಗಳಿಂದಲೂ ಆಧುನಿಕ ಸಂಸ್ಥಾ ಭವನಗಳಿಂದಲೂ ಕೂಡಿರುವ ಇದು ಪೌರ ಸಭೆಯ ಆಡಳಿತಕ್ಕೊಳ ಪಟ್ಟಿದೆ. ಈ ತಾಲ್ಲೂಕಿನಲ್ಲಿ 115 ಹಳ್ಳಿಗಳಿವೆ.

ಇಲ್ಲಿಯ ಮುಖ್ಯ ನದಿ ಕೃಷ್ಣಾ. ಕರದ್ಗೆ  1.6 ಕಿಮೀ ದೂರದಲ್ಲಿರುವ ಖೋಡ್ಸಿಯಿಂದ ಸು. 56 ಕಿಮೀ ಉದ್ದದ ಕೃಷ್ಣಾನಾಲೆಯನ್ನು ನಿರ್ಮಿಸಲಾಗಿದೆ. ತಾಲ್ಲೂಕಿನ ನೈಋತ್ಯ ಭಾಗ ಗುಡ್ಡಗಾಡುಗಳಿಂದ ಕೂಡಿದ್ದು ಸಾಕಷ್ಟು ನೀರಿನ ಅನುಕೂಲ ಪಡೆದಿಲ್ಲ. ಮಿಕ್ಕ ಕಡೆಗಳಲ್ಲಿ ನೀರಿಗೆ ಕೊರತೆಯಿಲ್ಲ. ಇಲ್ಲಿ ಭೂಮಿ ಫಲವತ್ತಾಗಿದೆ. ವ್ಯವಸಾಯಕ್ಕೆ ಅನುಕೂಲಕರ. ಜೋಳ, ರಾಗಿ, ದ್ವಿದಳ ಧಾನ್ಯ, ಕಬ್ಬು, ಹತ್ತಿ, ಹೊಗೆಸೊಪ್ಪು ಮತ್ತÄ ಹಣ್ಣು ತರಕಾರಿಗಳು ಮುಖ್ಯ ಬೆಳೆಗಳು.                                                             (ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ